ಶೇಂಗಾ ಚಟ್ನಿ (ಕಡಲೆ ಕಾಯಿ ಚಟ್ನಿ)
ಬೇಕಾಗುವ ಸಾಮಗ್ರಿಗಳು:
ಶೇಂಗಾ 1ಕಪ್
ಬೆಳ್ಳುಳ್ಳಿ 2ಗಡ್ಡೆ
ಬ್ಯಾಡಗಿ ಮೆಣಸಿನಕಾಯಿ 10
ಗುಂಟೂರು ಮೆಣಸಿನಕಾಯಿ 10
ಉಪ್ಪು ರುಚಿಗೆ ತಕ್ಕಷ್ಟು
ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರ
ಕೊತ್ತಂಬರಿ ಸೊಪ್ಪು ಸ್ವಲ್ಪ
ಮಾಡುವ ವಿಧಾನ:
ಶೇಂಗಾ ಮತ್ತು ಮೆಣಸಿನಕಾಯಿಗಳನ್ನು ಬೇರೆ ಬೇರೆಯಾಗಿ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ಹುಣಸೆಹಣ್ಣುನ್ನು ನೀರಿನಲ್ಲಿ ನೆನಸಿಡಿ.
ಈಗ ಎಲ್ಲವನ್ನೂ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಚಿಯಾದ ಶೇಂಗಾ ಚಟ್ನಿ ರೆಡಿ. ದೋಸೆ, ಇಡ್ಲಿ, ಚಪಾತಿ ಯಾವುದಕಾದರೂ ಸರಿ ಜೊತೆಯಾಗುತ್ತೆ.